ಕರುಣಾನಿಧಿ ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ | ಚೆನ್ನೈ ನಲ್ಲಿ ಅಂತ್ಯ ಸಂಸ್ಕಾರ | Oneindia Kannada

2018-08-08 2,136

Former Tamil Nadu Chief Minister and Dravida Munnetra Kazhagam (DMK) chief M Karunanidhi's mortal remains have been moved at Chennai's Rajaji Hall in Anna Salai on Wednesday morning.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತುವೇಲ್ ಕರುಣಾನಿಧಿ(94) ಅವರ ಅಗಲಿಕೆ ತಮಿಳುನಾಡನ್ನು ಶೋಕಸಾಗರದಲ್ಲಿಮುಳುಗಿಸಿದೆ. ವಯೋಸಹಜ ಅನಾರೋಗ್ಯದ ಕಾರಣ ಆಗಸ್ಟ್ 7 ರಂದು ಇಹಲೋಕ ತ್ಯಜಿಸಿದ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು ಎಂಬ ಕುರಿತ ಚರ್ಚೆ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಸದ್ಯಕ್ಕೆ ಅವರ ಪಾರ್ಥಿವ ಶರೀರವನ್ನು ಚೆನ್ನೈನ ರಾಜಾಜಿ ಹಾಲ್ ನಲ್ಲಿ ಇರಿಸಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.